France Kannada Balaga LogoFKB

ಕಿತನೂರು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳ ನಿರ್ಮಾಣ

Fri Nov 01 2019 00:00:00 GMT+0000 (Coordinated Universal Time)

FKB’s first major social impact event was the construction of toilets and urinals at the Government School in Kittanuru, Karnataka. This initiative was driven by the need for proper sanitation facilities for students, especially girls, to ensure their health, dignity, and continued education.

FKB members raised funds and coordinated with local volunteers and school authorities to build modern, hygienic toilets and urinals. The project was completed successfully and handed over to the school, benefiting hundreds of children.

This event marked the beginning of FKB’s commitment to giving back to society and supporting grassroots development in Karnataka. It also set a precedent for future community-driven projects by the association.


ಫ್ರಾನ್ಸ್ ಕನ್ನಡ ಬಳಗದ (ಎಫ್‌.ಕೆ.ಬಿ) ಕೋರ್ ತಂಡದ ಸದಸ್ಯರು ಶೌಚಾಲಯ ಯೋಜನೆಗಾಗಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತನೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುತಿಸಿ 2019ರ ಜನವರಿಯಲ್ಲಿ ಶಾಲೆಗೆ ಭೇಟಿ ನೀಡಿದರು, ಶಿಕ್ಷಕರು ಮತ್ತು ಸ್ಥಳೀಯರೊಂದಿಗಿನ ಸಂವಾದದ ನಂತರ ನಿರ್ಮಾಣ ಯೋಜನೆಯನ್ನು ಕೋರ್ ತಂಡವು ಅಭಿವೃದ್ಧಿಪಡಿಸಿತು.

2019ರ ಏಪ್ರಿಲ್‌ನಲ್ಲಿ ಯುಗಾದಿ ಆಚರಣೆಯ ಸಂದರ್ಭದಲ್ಲಿ ಈ ಪ್ರಸ್ತಾಪವನ್ನು ಘೋಷಿಸಲಾಯಿತು ಮತ್ತು ಸಾರ್ವಜನಿಕವಾಗಿ ಪ್ರಕಟಿಸಲಾಯಿತು, ಪ್ರತಿಕ್ರಿಯೆ ಹೆಚ್ಚು ಸಕಾರಾತ್ಮಕವಾಗಿರುವುದರಿಂದ, ಎಫ್‌.ಕೆ.ಬಿ ಶೌಚಾಲಯ ನಿರ್ಮಾಣ ಯೋಜನೆಗೆ ಸಂಸ್ಥೆ ನಿರ್ಧರಿಸಿತು.

ಹಂತ 1 / Phase 1

ಮೊದಲು / Before

Toilet Construction at Kittanuru before phase 1

ನಂತರ / After


ಈ ಯೋಜನೆಯ ಮೊದಲ ಹಂತವಾಗಿ, ಶಾಲೆಯ ಅಂಗಳದಲ್ಲಿ 12 ಮೂತ್ರಲಯಗಳು ಮತ್ತು 1 ಶೌಚಾಲಯವನ್ನು ಕಟ್ಟಲಾಗಿತ್ತು. ಕಾಮಗಾರಿಯನ್ನು ಶಾಲೆಯ ಸಹಭಾಗಿತ್ವದಲ್ಲಿ ಸುಮಾರು ೮೭೦೦೦ ರೂಪಾಯಿ (87,000 INR) ವೆಚ್ಚದಲ್ಲಿ ಕಟ್ಟಿಸಲಾಯಿತು. ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ದಣಿವರಿಯಿಲ್ಲದಪರಿಶ್ರಮದಿಂದ ಜೂನ್ ತಿಂಗಳಲ್ಲಿ ನಿರ್ಮಾಣ ಪೂರ್ಣಗೊಂಡಿತು.

3 ಜೂಲೈ 2019 ರಂದು ಬ್ಲಾಕ್ ಶಿಕ್ಷಣ ಅಧಿಕಾರಿ (ಕಿತ್ತನೂರು), ಎಸ್‌.ಡಿ.ಎಂ.ಸಿ ಅಧಿಕಾರಿ, ಎಫ್‌.ಕೆ.ಬಿ ಗೌರವ ಅಧ್ಯಕ್ಷ ಡಾ.ರವಿ ಮಟ್ಟಿ ಮತ್ತು ಶಾಲಾ ಮುಖ್ಯೋಪಾಧ್ಯಾಯಿ ಮಂಜುಳ ಹವಲ್ದಾರ್ ಕಾಮಗಾರಿಯ ಮೊದಲನೆಯ ಹಂತ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸೆರೆಗೊಂಡ ನಗುತ್ತಿರುವ ವಿದ್ಯಾರ್ಥಿಗಳ ಮುಖಗಳು ಎಫ್‌.ಕೆ.ಬಿ ಸದಸ್ಯರಲ್ಲಿ ಖುಷಿ ಇಮ್ಮಡಿಸಿತು.

Toilet Construction at Kittanuru phase 1 inaguration


ಹಂತ 2 / Phase 2

ಈ ಯೋಜನೆಯ ಎರಡನೇ ಹಂತವಾಗಿ, ಶಾಲೆಯ ಅಂಗಳದಲ್ಲಿ 8 ಮೂತ್ರಲಯಗಳು ಮತ್ತು 1 ಶೌಚಾಲಯವನ್ನು ಕಟ್ಟಲಾಗಿತ್ತು. ಕಾಮಗಾರಿಯನ್ನು ಶಾಲೆಯ ಸಹಭಾಗಿತ್ವದಲ್ಲಿ ಸುಮಾರು ೪೦,೦೦೦ ರೂಪಾಯಿ (40,000 INR) ವೆಚ್ಚದಲ್ಲಿ ಕಟ್ಟಿಸಲಾಯಿತು.

ನಿರ್ಮಾಣ ಪೂರ್ಣಗೊಂಡರೂ ಕೋವಿಡ್(COVID) ಕಾರಣದಿಂದಾಗಿ ಅಧಿಕೃತ ಉದ್ಘಾಟನೆ ಇಲ್ಲದೆ ಮಕ್ಕಳ ಬಳಕೆಗೆ ಅನುವುಮಾಡಿ ಕೊಡಲಾಗಿದೆ.

Toilet Construction at Kittanuru Phase 2


ಈ ಯೋಜನೆಗೆ ಕೈ ಜೋಡಿಸಿ ಸಹಕಾರ ನೀಡಿದ ಎಲ್ಲಾ ಫ್ರಾನ್ಸ್ ಕನ್ನಡ ಬಳಗದ ಸದಸ್ಯರಿಗೂ, ಶಾಲೆಯ ಶಿಕ್ಷಕವೃಂದಕ್ಕೂ, ಮಕ್ಕಳಿಗೂ ಹಾಗು ಎಲ್ಲಾ ಹಿತೈಷಿಗಳಿಗೂ ಫ್ರಾನ್ಸ್ ಕನ್ನಡ ಬಳಗ ಚಿರಋಣಿ. 🙏🏻

  • ಸಾಗರ್ ಉದಯ್ ಕುಮಾರ್