FKB ಡಿಂಡಿಮ - Our First Magazine
Sun Nov 01 2020 00:00:00 GMT+0000 (Coordinated Universal Time)
ನಮ್ಮ ನಾಡನ್ನು ಬಿಟ್ಟ ನಂತರ ಹೊರ ದೇಶದಲ್ಲಿ ಹೊಸ ಪರಿಸರದಲ್ಲಿ, ಹೊಸಭಾಷೆಯ ನಡುವೆ ಹೊಸ ರೀತಿಯ ಜೀವನ ನಡೆಸುವ ಪರಿಸ್ಥಿತಿಯಲ್ಲಿ ಈ ಎಲ್ಲ ಹೊಸತನದ ನಡುವೆ ನಮ್ಮ ಭಾಷೆಯನ್ನು ಜೀವಂತವಾಗಿಟ್ಟು ಅದನ್ನು ತಮ್ಮ ಮುಂದಿನ ಪೀಳಿಗೆಗೆ ಮುಂದುವರೆಸಿವುದು ಸಣ್ಣ ಕಾರ್ಯವಲ್ಲ . ಅದೊಂದು ಮಹತ್ತರವಾದ್ ಸವಾಲು. ಸವಾಲನ್ನು ಸಾಮರ್ಥ್ಯವಾಗಿ ಎದುರಿಸಲು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ನಾವು ಕಂಡುಕೊಂಡ ಉತ್ತರವೇ ಈ ಭಾಷಾ ಸಂಘ/ಸೌಂಸ್ಥೆಗಳು. ವಿವಿಧ ಮನಸ್ಕರ ಉತ್ಸಾಹ, ಸೇವಾ ಮನೋಭಾವ್, ಬದ್ಧತೆ, ಕ್ರಿಯಾಶೀಲತೆ, ಹೊಣೆಗಾರಿಕೆಗಳ ದ್ಯೋತಕವಾಗಿ ಸಂಘಗಳು ಬೆಳೆಯುತ್ತಾ ಹೋಗುತ್ತವೆ . ಸಂಘ/ಸೌಂಸ್ಥೆಗಳು ಏರ್ಪಿಡಿಸುವ ಕಾರ್ಯಕ್ರಮಗಳು ಸದಸ್ಯರ ಅಭಿರುಚಿ ಮತ್ತು ಕಾರ್ಯಕಾರಿ ಸಮಿತಿಗಳ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ತೋರಿಸಿದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಸಮಾವೇಶ, ಸಮ್ಮೇಳನಗಳು ಸಂಘದ್ ಭದ್ರ ಬುನಾದಿಯನ್ನು ಬೆಳೆದ ವಿಶಾಲತೆ ಮತ್ತು ಸಂಘಟನಾ ಶಕ್ತಿಯನ್ನು ಪ್ರತಿಟೀಬಿಂಬಿಸುತ್ತದೆ.
“ಡಿಂಡಿಮ” , ಇದು ಫ್ರಾನ್ಸ್ ಕನ್ನಡ ಬಳಗದ(ಏಫ. ಕೆ. ಬಿ) ಪ್ರಥಮ ಸುದ್ದಿ ಪತ್ರ. ಈ ಸುದ್ದಿಪತ್ರದ ಮೂಲಕ, ಎಫ್. ಕೆ. ಬಿ ಕೈಗೊಂಡ ವಿವಿಧ ಕಾರ್ಯಕ್ರಮಗಳನ್ನು ಸಂವಹನ ಮಾಡುವುದು ಮಾತ್ರವಲ್ಲದೆ ನಮ್ಮ ಎಫ್.ಕೆ.ಬಿ ಕುಟುಂಬದ ಪ್ರತಿಭಾವಂತ ಕಲಾವಿದರು, ಕವಿಗಳು ಮತ್ತು ಬರಹಗಾರರಿಗೆ ವೇದಿಕೆಯನ್ನು ಒದಗಿಸಲು ನಾವು ಉದ್ದೇಶಿಸಿದ್ದೇವೆ. ನಿಮ್ಮೆಲ್ಲರ ಅದ್ಭುತವಾದ ಪ್ರತಿಕ್ರೀಯೆಯಿಂದ , ನಮ್ಮ ಮೊದಲ ಆವೃತ್ತಿಯಲ್ಲಿ ನಾವು ಹೃದಯ ಸ್ಪರ್ಶಿಸುವ ವೈಯಕ್ತಿಕ ಅನುಭವಗಳು, ಹೃದಯ ಸ್ಪರ್ಶಿಸುವ ಕವನಗಳು ಹಾಗು ಆಸಕ್ತಿದಾಯಕವಾದ ಇತಿಹಾಸದ ವಿಷಯಗಳನ್ನು ಒಳಗೊಳ್ಳಲು ಸಾಧ್ಯವಾಯಿತು. ಈ ಸುದ್ದಿಪತ್ರವು ನಿಮಗೆ ಉತ್ತಮ ಓದುವ ಅನುಭವವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.
ಕನ್ನಡವನ್ನು ಉಳಿಸಿ , ಕನ್ನಡವನ್ನು ಬೆಳೆಸಿ
ಸಂಪಾದಕರು :
ಅಶ್ವಥ್ ದೇಸಾಯಿ
ಡಾ:ರಾಜಸ್ ರಾವ್
ಪರಿಕಲ್ಪನೆ ಮತ್ತು ವಿನ್ಯಾಸ :
ಮಲ್ಲಿಕಾರ್ಜುನ್
ಚಿಂತನ್ ಬಾಗುರ್
- ಅಶ್ವಥ್ ದೇಸಾಯಿ